2nd February 2025
ಚಡಚಣ : ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ. ೨೯ ರಿಂದ ಅದ್ದೂರಿಯಾಗಿ ಆರಂಭಗೊAಡಿದ್ದು, ಜಾತ್ರೆಯ ೩ನೇ ದಿನವಾದ ಶುಕ್ರವಾರ ಜಾತ್ರೆ ಅಂಗವಾಗಿ ಶುಕ್ರವಾರ ಜರುಗಿದ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತಿತ್ತು.
ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿಗೆ ಮೆರಗು ತಂದಿದ್ದರು.
ದೇಹದಾರ್ಡ್ಯ ಕಟ್ಟುಮಸ್ತು ಹೊಂದಿದ್ದ ಪೈಲ್ವಾನರು ಎದುರಾಳಿಗಳನ್ನು ಸೆಣಸುತ್ತಿರುವುದನ್ನು ನೋಡುತ್ತಿದ್ದ ಕುಸ್ತಿ ಪ್ರಿಯರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರುದುಂಬಿಸಿದರು. ಕುಸ್ತಿ ಪಟುಗಳು ಎದುರಾಳಿಗಳೊಂದಿಗೆ ಸೆಣಸಾಡುವಾಗ ಹಾಕುತ್ತಿದ್ದ ತಂತ್ರ-ಪ್ರತಿ ತಂತ್ರಗಳು, ಅವರು ಹಾಕುತ್ತಿದ್ದ ಬಿಗಿ ಪಟ್ಟಿಗೆ ನೋಡುಗರನ್ನು ಮನರಂಜಿಸಿದವು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕುಸ್ತಿ ಪಟುಗಳಿಗೆ ರೂ೫೦೦ ರಿಂದ ರೂ೫೧ ಸಾವಿರದವರೆಗೆ ಬಹುಮಾನ ನೀಡಲಾಯಿತು.
ಕುಸ್ತಿ ಪಟು ಹಾಗೂ ಕುಸ್ತಿ ಪ್ರೀಯ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ತಮ್ಮ ಸ್ವಂತ ರೂ ೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕುಸ್ತಿ ಮೈದಾನ ಎಲ್ಲರ ಗಮನ ಸೆಳೆಯಿತು.
ಕುಸ್ತಿ ಪಂದ್ಯಾವಳಿಗೆ ಮುಖಂಡ ಉದಯ ಕಾರಜೋಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ರಾಮ ಅವಟಿ, ರೈತರು,ಯುವಕರು,ಶ್ರೀಸಂಗಮೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಪಾವಲೆ ಹಾಗೂ ಎಲ್ಲ ಸದಸ್ಯರು ಇದ್ದರು.